ಸಾಹಿತ್ಯ : 'ಕುವೆಂಪು

ಸಂಗೀತ : ಎಂ ರಂಗರಾವ್ 
ರಾಗ:
ಗಾಯನ : ಎಸ್ ಜಾನಕಿ, 'ವಾಣಿ ಜಯರಾಂ 

ಆ ಆ ಆ ನ ನ .. ಆ ... ಆ ... ಆ ... 
ತೆರೆದಿದೆ ಮನೆ ಓ ಬಾ ಅತಿಥಿ
ಆ ... ಆ ... ಆ ...
ತೆರೆದಿದೆ ಮನೆ ಓ... ಬಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ

ಆವ ರೂಪದೊಳು ಬಂದರು ಸರಿಯೇ 
ಆವ ವೇಶದೊಳು ನಿಂದರು ಸರಿಯೇ 
ಆವ ರೂಪದೊಳು ಬಂದರು ಸರಿಯೇ 
ಆವ ವೇಶದೊಳು ನಿಂದರು ಸರಿಯೇ 
ನೇಸರು ದಯದೊಳು ಬಹೆಯ ಬಾ 
ತಿಂಗಳಂದದಲಿ ಬಹೆಯ ಬಾ.. 
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ

ಇಂತಾದರೂ ಬಾ ಅಂತಾದರೂ ಬಾ 
ಎಂತಾದರೂ ಬಾ ಬಾ ಬಾ 
ಇಂತಾದರೂ ಬಾ ಅಂತಾದರೂ ಬಾ 
ಎಂತಾದರೂ ಬಾ ಬಾ ಬಾ 
ಬೇಸರವಿದನು ಸರಿಸುವ ಹೊಸ ಬಾಳ 
ಉಸಿರಾಗಿ ಬಾ ಬಾ ಬಾ .. 
ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ

ಕಡಲಾಗಿ ಬಾ.. ಬಾನಾಗಿ ಬಾ.. 
ಗಿರಿಯಾಗಿ ಬಾ.. ಕಾನಾಗಿ ಬಾ..
ಕಡಲಾಗಿ ಬಾನಾಗಿ
ಗಿರಿಯಾಗಿ ಕಾನಾಗಿ
ತೆರೆದಿದೆ ಮನ ಓ .. ಬಾ .. 
ಹೊಸ ತಾನದ.. ಹೊಸ ಗಾನದ
ಹೊಸ ತಾನದ.. ಹೊಸ ಗಾನದ
ರಸ ಜೀವವ ತಾ ತಾ ತಾ 

ತೆರೆದಿದೆ ಮನೆ ಓ ಬಾ ಅತಿಥಿ
ಹೊಸ ಬೆಳಕಿನ ಹೊಸ ಗಾಳಿಯ 
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ ಅತಿಥಿ
ಹೊಸ ಬಾಳನು ತಾ... ಅತಿಥಿ...